Corporate Social Responsibility

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ

ನಮ್ಮ ಉಪಕ್ರಮಗಳು ಸಮಾಜವನ್ನು ಸಮಗ್ರವಾಗಿ ಸಬಲೀಕರಣಗೊಳಿಸುವ, ಅದರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಬೆಂಬಲಿಸುವಗುರಿಯನ್ನು ಹೊಂದಿವೆ.

ನಮ್ಮ ಸಮುದಾಯದ ಉಪಕ್ರಮಗಳು

ಟಾಟಾ ಮೋಟಾರ್ಸ್ ಫೈನಾನ್ಸ್‌ನಲ್ಲಿ, ಸಮುದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಹಲವಾರು ಉಪಕ್ರಮಗಳನ್ನು ಯೋಜಿಸಲಾಗಿದೆ.  

ಜವಾಬ್ದಾರಿಯುತ ಕಾರ್ಪೊರೇಟ್ ನಾಗರೀಕರಾಗಿ ನಮ್ಮ ಬದ್ಧತೆಯು ಚಾಲಕ ಸಮುದಾಯದ ಕಲ್ಯಾಣವನ್ನು ಉತ್ತೇಜಿಸುವುದು, ಜೊತೆಗೆ ಪರಿಸರವನ್ನು ಉಳಿಸಿಕೊಳ್ಳುವುದು ಮತ್ತು ಸುಧಾರಿಸುವುದು ಹಾಗೂ ಸಮಾಜದ ಹಿಂದುಳಿದ ಸದಸ್ಯರನ್ನು ಮೇಲಕ್ಕೆತ್ತುವುದಾಗಿದೆ.

ನಮ್ಮ ಸಂಸ್ಥೆಯಲ್ಲಿ, ನಾವು ಸಾಮಾಜಿಕವಾಗಿ ಜವಾಬ್ದಾರಿಯುತವಾಗಿರಲು ಮತ್ತು ನಾವು ಸೇವೆ ಸಲ್ಲಿಸುವ ಸಮುದಾಯಗಳ ಯೋಗಕ್ಷೇಮವನ್ನು ಸುಧಾರಸುವುದಕ್ಕಾಗಿ ಕೆಲಸ ಮಾಡಲು ಸಮರ್ಪಿತರಾಗಿದ್ದೇವೆ.

ಆಕಾಂಕ್ಷಾ ಯೋಜನೆ

ಸಂಹಿತಾದ ಕಲೆಕ್ಟಿವ್ ಗುಡ್ ಫೌಂಡೇಶನ್ (ಸಿಜಿಎಫ್)ಸಹಯೋಗದೊಂದಿಗೆ ಟಿಎಂಎಫ್‌ ತನ್ನ ಪ್ರಮುಖ ಕೌಶಲ್ಯ ಕಾರ್ಯಕ್ರಮ– ಆಕಾಂಕ್ಷಾವನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮವು ರಾಷ್ಟ್ರೀಯ ಕೌಶಲ್ಯ ಭಾರತ ಮಿಷನ್‌ಗೆ    ಅನುಗುಣವಾಗಿದೆ ಮತ್ತು ದೇಶಾದ್ಯಂತ 25,000+ ಕ್ಕೂ ಹೆಚ್ಚು ಚಾಲಕರಿಗೆ ಸಂಬಂಧಿತ ಕೌಶಲ್ಯ ಆಧಾರಿತ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ. ಆರ್ಥಿಕ ಸಾಕ್ಷರತೆ, ರಸ್ತೆ ಸುರಕ್ಷತೆ, ಆರೋಗ್ಯ ಮತ್ತು ನೈರ್ಮಲ್ಯ, ವಾಣಿಜ್ಯೋದ್ಯಮ ಕೌಶಲ್ಯಗಳು, ಸಂವಹನ ಕೌಶಲ್ಯಗಳು, ಡಿಜಿಟಲ್ ಸಾಕ್ಷರತೆ, ಉದ್ಯೋಗ-ಸಂಬಂಧಿತ ಕೌಶಲ್ಯಗಳು, ಮತ್ತು ಹೆಚ್ಚಿನವುಗಳಿಗೆ ತರಬೇತಿಗಳನ್ನು ನೀಡುವ ಮೂಲಕ ಚಾಲಕ ಸಮುದಾಯವನ್ನು ಸಬಲೀಕರಣಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ಡೇಶವಾಗಿದೆ. ಈ ಯೋಜನೆಯು ಚಾಲಕರ ಆರ್ಥಿಕ ಭವಿಷ್ಯವನ್ನು ಕಾಪಾಡಲು ಸಮಗ್ರ ಬಹು-ನಗರ ಉನ್ನತಿ ಮತ್ತು ನಗದು ಹರಿವು ನಿರ್ವಹಣಾ ಕಾರ್ಯಕ್ರಮವನ್ನು ನಡೆಸುವುದನ್ನು ಒಳಗೊಂಡಿದೆ. ಈ ಕಾರ್ಯಕ್ರಮವು ಶೈಕ್ಷಣಿಕ ಮತ್ತು ಪ್ರಾಯೋಗಿಕ ಸೆಷನ್‌ಗಳ ಸಂಯೋಜನೆಯಾಗಿದ್ದು ಸಂಬಂಧಿತ ಪರಿಣತಿಯನ್ನು ಪಡೆಯಲು ಚಾಲಕರಿಗೆ ಸಹಾಯ ಮಾಡುತ್ತದೆ.

‘ಆಕಾಂಕ್ಷಾ ಯೋಜನೆಯ’ ಮೂಲಕ, ಟಾಟಾ ಮೋಟಾರ್ಸ್ ಫೈನಾನ್ಸ್ ಮುಂಬರುವ ಅವಕಾಶಗಳನ್ನು ಬಳಸಿಕೊಳ್ಳಲು ಅಗತ್ಯವಿರುವ ಸಂಪನ್ಮೂಲದೊಂದಿಗೆ ಚಾಲಕ ಸಮುದಾಯವನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ತರಬೇತಿಯ ಪ್ರಮಾಣವನ್ನು ಹೆಚ್ಚಿಸುವುದು ಮಾತ್ರವಲ್ಲದೆ ತರಬೇತಿಯ‌ ಗುಣಮಟ್ಟವನ್ನು ವೃದ್ಧಿಸುವ ಮೂಲಕ  ಪರಿಣಾಮವನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಇದರಿಂದಾಗಿ ಚಾಲಕರು ಕೇವಲ ತಯಾರಾಗುವುದಿಲ್ಲ ಬದಲಾಗಿ ಯಾವುದೇ ಪರಿಸರದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲು ಸಿದ್ಧರಾಗುತ್ತಾರೆ.  ಇಲ್ಲಿಯವರೆಗೆ ಅಂಬಾಲಾ, ಅನುಪ್ಪುರ್, ಭೋಜ್ಪುರ, ಗುವಾಹಟಿ, ಗ್ವಾಲಿಯರ್, ಹೈದರಾಬಾದ್, ಲಖಿಂಪುರ್, ಲಕ್ನೋ, ಮುಂಬೈ, ಮುಜಾಫರ್ಪುರ, ನಮ್ಮಕ್ಕಲ್, ಪಾಟ್ನಾ, ಪುಣೆ, ವೈಜಾಗ್ ಮತ್ತು ವಿಜಯವಾಡ ಎಂಬ 15 ನಗರಗಳಲ್ಲಿ 8000 ಕ್ಕೂ ಹೆಚ್ಚು ಚಾಲಕರಿಗೆ ತರಬೇತಿ ನೀಡಲಾಗಿದೆ.

ಆಕಾಂಕ್ಷಾ ಯೋಜನೆಯು ಜ್ಞಾನವನ್ನು ಹೆಚ್ಚಿಸಲು, ಬೆಳವಣಿಗೆಯ ಅಡೆತಡೆಗಳನ್ನು ಪರಿಹರಿಸಲು ಮತ್ತು ಈ ಕೆಳಗಿನ ಕೇಂದ್ರೀಕೃತ ಕ್ಷೇತ್ರಗಳ ಮೂಲಕ ಚಾಲಕ ಸಮುದಾಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ

  • ಆರ್ಥಿಕ ಸಾಕ್ಷರತೆ: ಆರ್ಥಿಕ ಜಾಣ್ಮೆ ಮತ್ತು ಶಿಸ್ತನ್ನು ಅಭಿವೃದ್ಧಿಪಡಿಸುವ ಬಗ್ಗೆ ಅವರನ್ನು ಸೂಕ್ಷ್ಮಗ್ರಾಹಿಯನ್ನಾಗಿಸುವುದು ಮತ್ತು ತರಬೇತಿ ನೀಡುವುದು.
  • ಉದ್ಯಮಶೀಲತಾ ಕೌಶಲ್ಯಗಳು
  • ವ್ಯವಹಾರಕ್ಕಾಗಿ ಸಂವಹನಾ ಕೌಶಲ್ಯಮತ್ತು ಉದ್ಯೋಗಾಹೃತೆಯನ್ನು ಹೆಚ್ಚಿಸುವುದು.
  • ಡಿಜಿಟಲ್ ಸಾಕ್ಷರತೆ: ಡಿಜಿಟಲ್ ಪರಿಕರಗಳ ಮೂಲಕ ಅವರ ಖರ್ಚುಗಳನ್ನು ಟ್ರ್ಯಾಕ್ ಮಾಡಲು ಮತ್ತು ನಿರ್ವಹಿಸಲು ಅವರಿಗೆ ಅನುವು ಮಾಡಿಕೊಡುವುದು.
  • ಉದ್ಯೋಗ ಸಂಬಂಧಿತ: ರಸ್ತೆ ಸುರಕ್ಷತೆ, ಮಾದಕ ದ್ರವ್ಯ ಸೇವನೆ, ಆರೋಗ್ಯ ಮತ್ತು ಸ್ವಾಸ್ಥ್ಯ.

ಸುರಕ್ಷಾ ಯೋಜನೆ

ಟಿಎಂಎಫ್‌ನ  ಸುರಕ್ಷಾ ಯೋಜನೆಯು 'ರಕ್ಷಣೆಯ ಭರವಸೆ'ಯಾಗಿದ್ದು, ಸಂಹಿತಾದ ಕಲೆಕ್ಟಿವ್ ಗುಡ್ ಫೌಂಡೇಶನ್ (ಸಿಜಿಎಫ್),  ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ. ದೇಶದ ಟ್ರಕ್ ಚಾಲಕರು ಮತ್ತು ಟ್ರಕ್‌ ಚಾಲಕರಿಗೆ ಉಚಿತ ಆರೋಗ್ಯ ತಪಾಸಣೆಗಳನ್ನು ಒದಗಿಸುವ ಉದ್ದೇಶದಿಂದ, ಭಾರತದಾದ್ಯಂತ 15 ನಗರಗಳಲ್ಲಿ ಹಲವಾರು ಆರೋಗ್ಯ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಯೋಜನೆಯು ಸ್ಥಳದಲ್ಲೇ ನೋಂದಣಿಗಳನ್ನು ಹೊಂದಿತ್ತು ಮತ್ತು 11,500 ಕ್ಕೂ ಹೆಚ್ಚು ಚಾಲಕರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

ಟ್ರಕ್ ಚಾಲಕರು ಕೆಲಸದ ಪರಿಸ್ಥಿತಿಗಳ ಸ್ವರೂಪದಿಂದಾಗಿ ಹೆಚ್ಚಿನ ಆರೋಗ್ಯದ ಅಪಾಯದಲ್ಲಿರುತ್ತಾರೆರೆ. ಆದ್ದರಿಂದ, ಭಾರತದಲ್ಲಿ ಹೆಚ್ಚಿನ ಟ್ರಕ್ ಚಾಲಕರು ಬೆನ್ನು ನೋವು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕಣ್ಣಿನ-ಸಂಬಂಧಿತ ಸಮಸ್ಯೆಗಳನ್ನು ಹೊಂದಿದ್ದಾರೆ. ಟ್ರಕ್‌ ಚಾಲಕರು ತಮ್ಮ ಸೇವೆಗಳನ್ನು ಶ್ರದ್ಧೆಯಿಂದ ಒದಗಿಸುತ್ತಿದ್ದರೂ, ಅವರ ಸುರಕ್ಷತೆಯು ಹಿಂದೆ ಸರಿದಿದೆ. ಟ್ರಕ್‌ ಚಾಲಕರು ತಮ್ಮ ಆರೋಗ್ಯ ಪರಿಸ್ಥಿತಿಗಳ ಮೇಲೆ ನಿಗಾ ಇಡುವುದು ಅತ್ಯಗತ್ಯ  ಆದ್ದರಿಂದ, ಈ ಉಪಕ್ರಮದ ಮೂಲಕ ಅವರ ಪ್ರಸ್ತುತ ಆರೋಗ್ಯ ಸ್ಥಿತಿಯ ಬಗ್ಗೆ ಅವರಿಗೆ ಅರಿವು ಮೂಡಿಸುವ ಮೂಲಕ ಬ್ರ್ಯಾಂಡ್‌ ಒಂದು ಹೆಜ್ಜೆ ಮುಂದೆ ಹೋಗಲು ನಿರ್ಧರಿಸಿದೆ.

ಬೊಜ್ಜು ಸ್ಥಿತಿ ಪರಿಶೀಲನೆ (ಬಿಎಂಐ ನಿರ್ಣಯ, ದೇಹದ ಅಳತೆಗಳು) ಸೇರಿದಂತೆ ಹಲವಾರು ಪರೀಕ್ಷೆಗಳು; ದೇಹದ ಉಷ್ಣತೆ ಮತ್ತು ಆಮ್ಲಜನಕದ ಶುದ್ಧತ್ವದೊಂದಿಗೆ ಕೋವಿಡ್ ಮತ್ತು ಉಸಿರಾಟದ ಅಪಾಯಗಳ ನಿರ್ಣಯ; ಅಧಿಕ ರಕ್ತದೊತ್ತಡಕ್ಕಾಗಿ ರಕ್ತದೊತ್ತಡ ತಪಾಸಣೆ; ಆರೋಗ್ಯಕರ ಹೃದಯಕ್ಕಾಗಿ ಲಿಪಿಡ್ ಪ್ರೊಫೈಲ್ ಪರೀಕ್ಷೆಗಳು, ಇಸಿಜಿ, ರಕ್ತದ ಸಕ್ಕರೆ, ಹಿಮೋಗ್ಲೋಬಿನ್; ತೀಕ್ಷ್ಣತೆ, ಅಸಮದೃಷ್ಟಿ, ಬಣ್ಣದ ಕುರುಡುತನ ಮತ್ತು ದೃಷ್ಟಿಗೆ ಶಿಫಾರಸು ಮಾಡಿದರೆ ಕನ್ನಡಕ - ಇವೆಲ್ಲವೂ ಒಟ್ಟಾರೆ ಆರೋಗ್ಯ ಮೌಲ್ಯಮಾಪನದ ಪ್ರಕ್ರಿಯೆಯ ಭಾಗವಾಗಿದ್ದವು.

ನಮ್ಮ ತೊಡಗಿಸಿಕೊಳ್ಳುವಿಕೆಯ ಉಪಕ್ರಮಗಳು

ಟಿಎಂಎಫ್‌ನಲ್ಲಿ, ನಮ್ಮ ತೊಡಗಿಸಿಕೊಳ್ಳುವಿಕೆಯ  ಉಪಕ್ರಮಗಳು ಉದ್ಯೋಗಿ ಸ್ವಯಂಸೇವಕರೊಂದಿಗೆ ಸಹ ಹೊಂದಿಕೆಯಾಗುತ್ತವೆ ಮತ್ತು ಸ್ವಯಂಸೇವಕರಾಗಿ ಸ್ವಲ್ಪ ಸಮಯ ಭಾಗವಹಿಸುವಂತೆ ನಾವು ನಮ್ಮ ಉದ್ಯೋಗಿಗಳನ್ನು ನಿಯಮಿತವಾಗಿ ಪ್ರೋತ್ಸಾಹಿಸುತ್ತೇವೆ. 2022-23 ಹಣಕಾಸು ವರ್ಷದಲ್ಲಿ, ನಮ್ಮ ಉದ್ಯೋಗಿಗಳು ಒಟ್ಟು 4771 ಗಂಟೆಗಳ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ

ಸಾಮಾಜಿಕ ಕಾರಣಗಳಿಗಾಗಿ ಸ್ವಯಂಸೇವಕರಾಗಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ಪ್ರೊಎಂಗೇಜ್ ಮತ್ತು ಟಾಟಾ ಸ್ವಯಂಸೇವಕರ ವಾರದಂತಹಟಾಟಾ ಸಸ್ಟೈನೆಬಿಲಿಟಿ ಗ್ರೂಪ್‌ನ ಉಪಕ್ರಮಗಳನ್ನು ನಾವು ಬೆಂಬಲಿಸುತ್ತೇವೆ ಮತ್ತು ಸಕ್ರಿಯವಾಗಿ ಭಾಗವಹಿಸುತ್ತೇವೆ.

ಟಿಎಂಎಫ್‌ನಲ್ಲಿ, ನಾವು ಕ್ರಿಸ್‌ಮಸ್, ಹೋಳಿ, ದೀಪಾವಳಿ, ದಾನ ಉತ್ಸವ, ಮುಂತಾದ ಹಬ್ಬಗಳನ್ನು ಆಚರಿಸುವಾಗ ಸಹಾಯ ಮಾಡಲು ಮತ್ತು ಹಬ್ಬದ ಸಂತೋಷವನ್ನು ಹರಡಲು ನಾವು ನಮ್ಮ ಕೈಲಾದದ್ದನ್ನು ಮಾಡುತ್ತೇವೆ ಮತ್ತು ಸಮಾಜಕ್ಕೆ ಹಿಂತಿರುಗಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳುತ್ತೇವೆ.  

ಮುಚ್ಚಿ

ಟಾಟಾ ಮೋಟಾರ್ಸ್ ಫೈನಾನ್ಸ್‌ನಿಂದ ಆಕರ್ಷಕ ಸಾಲಗಳನ್ನು ಪಡೆಯಿರಿ

ಈಗ ಅನ್ವಯಿಸಿ+ಮೇಲಕ್ಕೆ ಸರಿಸಿ