Digital Payment
Digital Payment
Digital Payment

ಕ್ಲಿಕ್ ಮಾಡಿ ಮತ್ತು ಪಾವತಿಸಿ

ನಿಮ್ಮ ಇಎಂಐ ಪಾವತಿಯನ್ನು ಸುಲಭವಾಗಿ ಮತ್ತು ವೇಗವಾಗಿ ಮಾಡಿ

ಪರಿಚಯ

ಅನೇಕ ವರ್ಷಗಳಿಂದ, ಟಾಟಾ ಮೋಟಾರ್ಸ್ ಫೈನಾನ್ಸ್ ತನ್ನ ಸಾಲದ ಕೊಡುಗೆಗಳಿಗೆ ಗ್ರಾಹಕರು ತ್ವರಿತ ಪ್ರವೇಶವನ್ನು ಹೊಂದಲು ಹೆಚ್ಚುವರಿ ಪ್ರಯತ್ನ ಮಾಡಿದೆ. ಸರಳವಾದ ಸಾಲದ ಅರ್ಜಿಗಳು ಮತ್ತು ಮರುಪಾವತಿಯ ಮಾರ್ಗಗಳೊಂದಿಗೆ ಗ್ರಾಹಕರಿಗೆ ಅನುಕೂಲವಾಗುವಂತೆ ಮಾಡಲು ಟಾಟಾ ಮೋಟಾರ್ಸ್ ಫೈನಾನ್ಸ್‌ ಮಾಡಿದ ಅಚಲ ಪ್ರಯತ್ನಕ್ಕೆ ಅನುಗುಣವಾಗಿ, ಅದು ಡಿಜಿಟಲ್ ಮತ್ತು ಪರ್ಯಾಯ ಪಾವತಿ ಪರಿಹಾರಗಳ ಅಳವಡಿಕೆಗೆ ಪ್ರೋತ್ಸಾಹ ನೀಡುವುದನ್ನು ಮುಂದುವರೆಸಿದೆ. 'ಗ್ರಾಹಕ ಕೇಂದ್ರೀಯತೆ' ಟಿಎಂಎಫ್‌ನ ಒಟ್ಟಾರೆ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿರುವುದರಿಂದ, ಟಾಟಾ ಮೋಟಾರ್ಸ್ ಫೈನಾನ್ಸ್ ಬಳಕೆದಾರ ಸ್ನೇಹಿ ' ಕಸ್ಟಮರ್‌ವನ್ ಆ್ಯಪ್‌' ಅನ್ನು ಅಭಿವೃದ್ಧಿಪಡಿಸಿದೆ ಮತ್ತು ತಡೆರಹಿತ ತುತ್ತತುದಿಯವರೆಗಿನ ಗ್ರಾಹಕಪ್ರಯಾಣವನ್ನು ಒದಗಿಸಲು ಆನ್‌ಲೈನ್ ಪಾವತಿ ಪೂರೈಕೆದಾರರ ಒಂದು ಶ್ರೇಣಿಯೊಂದಿಗೆ ಸಹಭಾಗಿತ್ವ ಹೊಂದಿದೆ.

ಪಾವತಿ ವಿಧಾನಗಳು

ಬಿಬಿಪಿಎಸ್

ಯಾವಾಗಲಾದರೂ, ಎಲ್ಲಿಯಾದರೂ, ಬಿಲ್ ಪಾವತಿ. ಭಾರತ್ ಬಿಲ್ ಪಾವತಿ ವ್ಯವಸ್ಥೆ (ಬಿಬಿಪಿಎಸ್) ಎಂಬುದು ಭಾರತದಲ್ಲಿನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಂಯೋಜಿತ ಬಿಲ್ ಪಾವತಿ ವ್ಯವಸ್ಥೆಯಾಗಿದೆ. ಬಿಬಿಪಿಎಸ್  "ಯಾವಾಗಲಾದರೂ, ಎಲ್ಲಿಯಾದರೂ, ಬಿಲ್ ಪಾವತಿ" ಅನ್ನು ಸುಗಮಗೊಳಿಸುತ್ತದೆ. ಇದು ಎಲ್ಲ ಕಡೆಗಳಲ್ಲಿ ಬಹು ಪಾವತಿ ವಿಧಾನಗಳನ್ನು ಸಕ್ರಿಯಗೊಳಿಸುವ ಡಿಜಿಟಲ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಗ್ರಾಹಕರಿಗೆ ಸಮಗ್ರ, ಪ್ರವೇಶಿಸಬಹುದಾದ ಬಿಲ್ ಪಾವತಿ ಸೇವೆಗಳನ್ನು ಒದಗಿಸುತ್ತದೆ

ಇನ್‌ಸ್ಟಾಪೇ/ಜಿಪೇ/ ಫೋನ್‌ಪೆ

ತ್ವರಿತಪಾವತಿ ಸೇವೆ [ಇನ್‌ಸ್ಟಾಪೇ/ ಕ್ವಿಕ್ ಪೇ ಎಂದು ಜನಪ್ರಿಯವಾಗಿ ಕರೆಯಲಾಗುವ ಬ್ಯಾಂಕ್ ತನ್ನ ಆನ್‌ಲೈನ್ ಬ್ಯಾಂಕಿಂಗ್ ಗ್ರಾಹಕರಿಗೆ ನೀಡುವ ಸೇವೆಯಾಗಿದೆ, ಅಲ್ಲಿ ಗ್ರಾಹಕರು ಯಾವುದೇ ಪೂರ್ವ ನೋಂದಣಿ ಪ್ರಕ್ರಿಯೆಯಿಲ್ಲದೆ ನೈಜ-ಸಮಯದ ಆಧಾರದ ಮೇಲೆ ಆನ್‌ಲೈನ್‌ನಲ್ಲಿ ಸಾಲದ ಖಾತೆಯ ಮರುಪಾವತಿಯನ್ನು ಮಾಡಬಹುದು.

ಇ-ನಾಚ್‌ ನೋಂದಣಿ

 ಇ- ನಾಚ್‌ಎಂಬುದು ನ್ಯಾಶನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಆರಂಭಿಸಿದ ಸೇವೆಯಾಗಿದೆ. ಇದು ನಮ್ಮ ಟಿಎಂಎಫ್ ಬ್ಯಾಂಕರ್‌ಗಳು ಮತ್ತು ಗ್ರಾಹಕರ ನಡುವೆ ವಿದ್ಯುನ್ಮಾನವಾಗಿ ಆದೇಶಗಳ ನೋಂದಣಿಯನ್ನು ಸುಗಮಗೊಳಿಸುತ್ತದೆ. ತಮ್ಮ ರುಜುವಾತುಗಳನ್ನು ವಿದ್ಯುನ್ಮಾನವಾಗಿ ಬಳಸುವ ಮೂಲಕ ಗ್ರಾಹಕರು ನೀಡಿದ ದೃಢೀಕರಣವನ್ನು ಪರಿಗಣಿಸಿದಾಗ ಇದು ನಿಖರವಾಗಿದೆ ಮತ್ತು ಸುರಕ್ಷಿತವಾಗಿದೆ.

ಸುರಕ್ಷತೆ ಮತ್ತು ಭದ್ರತಾ ಸಲಹೆಗಳು

ಮುಚ್ಚಿ

ಟಾಟಾ ಮೋಟಾರ್ಸ್ ಫೈನಾನ್ಸ್‌ನಿಂದ ಆಕರ್ಷಕ ಸಾಲಗಳನ್ನು ಪಡೆಯಿರಿ

ಈಗ ಅನ್ವಯಿಸಿ+ಮೇಲಕ್ಕೆ ಸರಿಸಿ