About TMF
About TMF
About TMF

ನಮ್ಮ ಕುರಿತು

About TMF

ಟಿಎಂಎಫ್‌ ಸಮೂಹ ಸಂಸ್ಥೆಗಳ ಕುರಿತು

ಟಾಟಾ ಮೋಟಾರ್ಸ್ ಫೈನಾನ್ಸ್ ಲಿಮಿಟೆಡ್ (ಟಿಎಂಎಫ್‌ಎಲ್‌) ಭಾರತದ ಪ್ರಮುಖ ಆಟೋಮೋಟಿವ್ ಫೈನಾನ್ಷಿಯರ್‌ಗಳಲ್ಲಿ ಒಂದಾಗಿದೆ ಮತ್ತು ವಾಣಿಜ್ಯ ಮತ್ತು ಪ್ರಯಾಣಿಕ ವಾಹನ ವ್ಯವಸ್ಥೆಯ ಆರ್ಥಿಕ ಅಗತ್ಯಗಳನ್ನು ಸಮಗ್ರವಾಗಿ ಪೂರೈಸುತ್ತದೆ.

350+ ಶಾಖೆಗಳೊಂದಿಗೆ ರಾಷ್ತ್ರದಾದ್ಯಂತ ವ್ಯಾಪಿಸಿರುವ ನಮ್ಮ ಉಪಸ್ಥಿತಿಯೊಂದಿಗೆ, ಟಾಟಾ ಮೋಟಾರ್ಸ್ ಫೈನಾನ್ಸ್ ಲಿಮಿಟೆಡ್ ಒಂದು ನಾನ್-ಬ್ಯಾಂಕಿಂಗ್ ಹಣಕಾಸು ಸಂಸ್ಥೆಯಾಗಿದ್ದು (ಎನ್‌ಬಿಎಫ್‌ಸಿ), ಟಾಟಾ ಮೋಟರ್ಸ್ ಲಿಮಿಟೆಡ್ (ಟಿಎಂಎಲ್‌) ನ ಸಂಪೂರ್ಣ ಒಡೆತನದಲ್ಲಿರುವ ಪ್ರಮುಖ ಹೂಡಿಕೆ ಸಂಸ್ಥೆಯಾದ (ಸಿಐಸಿ) ಟಿಎಂಎಫ್‌ ಹೋಲ್ಡಿಂಗ್ಸ್ ಲಿಮಿಟೆಡ್ (ಟಿಎಂಎಫ್‌ಎಚ್‌ಎಲ್‌) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ನಮ್ಮ ಸಾಟಿಯಿಲ್ಲದ, 360-ಡಿಗ್ರಿ ಶ್ರೇಣಿಯ ಸೇವೆಗಳು, ಹೊಸ ಮತ್ತು ಪೂರ್ವ-ಮಾಲೀಕತ್ವದ (ಬಳಸಿದ) ವಾಹನಗಳಿಗೆ ಹಣಕಾಸು ಸೌಲಭ್ಯಗಳನ್ನು, ನವೀನ ಇಂಧನ ಸಾಲ ಸೌಲಭ್ಯಗಳು ಮತ್ತು ವಾಹನ ನಿರ್ವಹಣೆ ಸಾಲಗಳ ಮೂಲಕ ವಾಣಿಜ್ಯ ವಾಹನ ಒಪೆಕ್ಸ್ ಹಣಕಾಸು ಸೌಲಭ್ಯಗಳನ್ನು, ಹಾಗೆಯೇ ಹಾಗೂ ವಿತರಕ ಮತ್ತು ಹಣಕಾಸು ಪರಿಹಾರಗಳನ್ನು ಒಳಗೊಂಡಿದೆ.

ಟಾಟಾ ಮೋಟಾರ್ಸ್ ಫೈನಾನ್ಸ್‌ನಲ್ಲಿ, ಭಾರತದಾದ್ಯಂತ ನಮ್ಮ ಗ್ರಾಹಕರು, ಜೊತೆಗಾರರು ಮತ್ತು ಪಾಲುದಾರರ ಅಸಂಖ್ಯಾತ ಯಶಸ್ಸಿನ ಕಥೆಗಳಿಗೆ ಅವಿಭಾಜ್ಯ ಕೊಡುಗೆ ನೀಡುವ ನಮ್ಮ ಬದ್ಧತೆಯನ್ನು ಒತ್ತಿಹೇಳುವ ಮಾರ್ಗದರ್ಶಿ ತತ್ವವಾದ ‘ವಿನ್ನಿಂಗ್ ಟುಗೆದರ್’ ಎಂಬ ಮನೋಭಾವವನ್ನು ನಾವು ಹೆಮ್ಮೆಯಿಂದ ಎತ್ತಿ ಹಿಡಿಯುತ್ತೇವೆ.

Our Vision

ನಮ್ಮ ವಿಶನ್‌

ಆರ್ಥಿಕ ಯಶಸ್ಸನ್ನು ಸಕ್ರಿಯಗೊಳಿಸುವುದು, ಆಕಾಂಕ್ಷೆಗಳನ್ನು ಪೂರೈಸುವುದು

Our Mission

ನಮ್ಮ ಮಿಷನ್

ವಾಹನ ವ್ಯವಸ್ಥೆಯ ಸುಸ್ಥಿರ ಬೆಳವಣಿಗೆಯನ್ನು ಬೆಂಬಲಿಸುವ, ಗ್ರಾಹಕ-ಕೇಂದ್ರಿತ ಹಣಕಾಸು ಉತ್ಪನ್ನಗಳು ಮತ್ತು ಪರಿಹಾರಗಳನ್ನು ಒದಗಿಸುವುದು.

ಉದ್ದೇಶ ಹೇಳಿಕೆ

ಟಾಟಾ ವಾಹನ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಅಳವಡಿಸಿಕೊಳ್ಳಲು ಪ್ರತಿ ಹಂತದಲ್ಲೂ ಲಭ್ಯವಿರುವ ಹಣಕಾಸು ಸೌಲಭ್ಯಗಳನ್ನು ಒದಗಿಸುವುದು.

ಪ್ರಮುಖ ಮೌಲ್ಯಗಳು

ಟಿಎಂಎಫ್‌ಬಿಎಸ್‌ಎಲ್‌ನ ಸಾಮರ್ಥ್ಯವು ಅದರ ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಳ್ಳುವುದರಲ್ಲಿದೆ. ಇದು ಅನೇಕ ಗ್ರಾಹಕ-ಸ್ನೇಹಿ ಯೋಜನೆಗಳಿಗೆ ಕಾರಣವಾಗುತ್ತದೆ.

ಇದರ ಅಡಿಪಾಯವು ಬಲವಾದ ಪ್ರಮುಖ ಮೌಲ್ಯಗಳ ಮೇಲೆ ಸಧೃಡವಾಗಿ ನಿಂತಿದೆ, ಅವುಗಳೆಂದರೆ:

  • ಪ್ರಾಮಾಣಿಕತೆ

    ಪ್ರಾಮಾಣಿಕತೆ

  • ಪಾರದರ್ಶಕತೆ

    ಪಾರದರ್ಶಕತೆ

  • ಪರಸ್ಪರ ಸಹಕಾರ

    ಪರಸ್ಪರ ಸಹಕಾರ

  • ಪರಾನುಭೂತಿ

    ಪರಾನುಭೂತಿ

  • ಚುರುಕುತನ

    ಚುರುಕುತನ

ನಮ್ಮ ಸಾಮರ್ಥ್ಯಗಳು

  • ಭಾರತದ ಅತ್ಯಂತ ವಿಶ್ವಾಸಾರ್ಹ ಹೆಸರಿನ ಅವಿಭಾಜ್ಯ ಅಂಗ

    ಭಾರತದ ಅತ್ಯಂತ ವಿಶ್ವಾಸಾರ್ಹ ಹೆಸರಿನ ಅವಿಭಾಜ್ಯ ಅಂಗ

  • ಬಲವಾದ ಆರ್ಥಿಕ ಅಡಿಪಾಯ

    ಬಲವಾದ ಆರ್ಥಿಕ ಅಡಿಪಾಯ

  • ವಿವರವಾದ ಪ್ರಕ್ರಿಯೆಗಳು ಮತ್ತು ಅಪಾಯ ನಿರ್ವಹಣೆ ಪ್ರಕ್ರಿಯೆಗಳಿಂದ ಬೆಂಬಲಿತವಾದ ಉತ್ತಮವಾಗಿ ವ್ಯಾಖ್ಯಾನಿಸಲಾದ ನಿಯಂತ್ರಣಗಳು

    ವಿವರವಾದ ಪ್ರಕ್ರಿಯೆಗಳು ಮತ್ತು ಅಪಾಯ ನಿರ್ವಹಣೆ ಪ್ರಕ್ರಿಯೆಗಳಿಂದ ಬೆಂಬಲಿತವಾದ ಉತ್ತಮವಾಗಿ ವ್ಯಾಖ್ಯಾನಿಸಲಾದ ನಿಯಂತ್ರಣಗಳು

  • ನವೀನ ಗ್ರಾಹಕ ಕೇಂದ್ರಿತ ಯೋಜನೆಗಳು

    ನವೀನ ಗ್ರಾಹಕ ಕೇಂದ್ರಿತ ಯೋಜನೆಗಳು

  • ಅತ್ಯಂತ ಅನುಭವೀ ನಿರ್ವಹಣಾ ತಂಡ

    ಅತ್ಯಂತ ಅನುಭವೀ ನಿರ್ವಹಣಾ ತಂಡ

ಟಾಟಾ ನೀತಿ ಸಂಹಿತೆ

ಈ ಸವಿವರವಾದ ದಾಖಲೆಯು ಉದ್ಯೋಗಿಗಳಿಗೆ ಮತ್ತು ಟಾಟಾದ ಅಡಿಯಲ್ಲಿ ಬರುವ ಎಲ್ಲಾ ಸಮೂಹ ಸಂಸ್ಥೆಗಳಿಗೆ ನೈತಿಕ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಸಮೂಹವು ತನ್ನ ವ್ಯವಹಾರವನ್ನು ನಡೆಸುವ ಮಾರ್ಗಸೂಚಿಗಳನ್ನು ಒದಗಿಸುತ್ತದೆ.

ಟಾಟಾ ನೀತಿ ಸಂಹಿತೆ (ಟಿಸಿಓಸಿ) ನಾವು ಕಾರ್ಯನಿರ್ವಹಿಸುವ ಸಮುದಾಯಗಳು ಸೇರಿದಂತೆ ನಮ್ಮ ಪ್ರತಿ ಪಾಲುದಾರರಿಗೆ ನಮ್ಮ ಬದ್ಧತೆಯನ್ನು ವಿವರಿಸುತ್ತದೆ. ಇದು ನಾವು ವ್ಯಾವಹಾರಿಕ ಸಂದಿಗ್ಧಗಳ ಕವಲುದಾರಿಯಲ್ಲಿ ಸಿಲುಕಿದಾಗ ನಮಗೆ ಸರಿಯಾದ ಮಾರ್ಗವನ್ನು ತೋರಿಸುವ ದಾರಿದೀಪವಾಗಿದೆ. ಪ್ರಸ್ತುತ ಕಾನೂನುಗಳ ಮತ್ತು ನಿಬಂಧನೆಗಳ ಬದಲಾವಣೆಗೆ ಹೊಂದಿಕೆಯಾಗುವಂತೆ ಈ ನೀತಿಗಳು ಕ್ರಿಯಾತ್ಮಕವಾಗಿವೆ ಮತ್ತು ಅವುಗಳನ್ನು ನಿಯತಕಾಲಿಕವಾಗಿ ನವೀಕರಿಸಲಾಗುತ್ತದೆ  ಹಾಗಿದ್ದೂ ಅದರ ಪ್ರಮುಖ ಅಂಶಗಳಲ್ಲಿ ಬದಲಾವಣೆಗಳಾಗುವುದಿಲ್ಲ.

ನಾವು ಪಾಲಿಸುವ  ಮೌಲ್ಯಗಳು ಮತ್ತು ತತ್ವಗಳ ಕುರಿತು ಉದ್ಯೋಗಿಗಳು ತಮ್ಮ ಕರ್ತವ್ಯಗಳು ಮತ್ತು ಬದ್ಧತೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನಮ್ಮ ಉದ್ಯೋಗಿಗಳಿಗೆ ಸಹಾಯ ಮಾಡಲು ನಾವು ಹೊಂದಿರುವ ಬದ್ದತೆಗೆ ಈ ನೀತಿ ಸಂಹಿತೆ ಸಾಕ್ಷಿಯಾಗಿದೆ. 

ಟಾಟಾ ನೀತಿ ಸಂಹಿತೆ (ಟಿಸಿಓಸಿ) ಓದಲು ಕೆಳಗೆ ಕ್ಲಿಕ್ ಮಾಡಿ:

ಮುಚ್ಚಿ

ಟಾಟಾ ಮೋಟಾರ್ಸ್ ಫೈನಾನ್ಸ್‌ನಿಂದ ಆಕರ್ಷಕ ಸಾಲಗಳನ್ನು ಪಡೆಯಿರಿ

ಈಗ ಅನ್ವಯಿಸಿ+ಮೇಲಕ್ಕೆ ಸರಿಸಿ