ಟಾಟಾ ನೀತಿ ಸಂಹಿತೆ
ಈ ಸವಿವರವಾದ ದಾಖಲೆಯು ಉದ್ಯೋಗಿಗಳಿಗೆ ಮತ್ತು ಟಾಟಾದ ಅಡಿಯಲ್ಲಿ ಬರುವ ಎಲ್ಲಾ ಸಮೂಹ ಸಂಸ್ಥೆಗಳಿಗೆ ನೈತಿಕ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಸಮೂಹವು ತನ್ನ ವ್ಯವಹಾರವನ್ನು ನಡೆಸುವ ಮಾರ್ಗಸೂಚಿಗಳನ್ನು ಒದಗಿಸುತ್ತದೆ.
ಟಾಟಾ ನೀತಿ ಸಂಹಿತೆ (ಟಿಸಿಓಸಿ) ನಾವು ಕಾರ್ಯನಿರ್ವಹಿಸುವ ಸಮುದಾಯಗಳು ಸೇರಿದಂತೆ ನಮ್ಮ ಪ್ರತಿ ಪಾಲುದಾರರಿಗೆ ನಮ್ಮ ಬದ್ಧತೆಯನ್ನು ವಿವರಿಸುತ್ತದೆ. ಇದು ನಾವು ವ್ಯಾವಹಾರಿಕ ಸಂದಿಗ್ಧಗಳ ಕವಲುದಾರಿಯಲ್ಲಿ ಸಿಲುಕಿದಾಗ ನಮಗೆ ಸರಿಯಾದ ಮಾರ್ಗವನ್ನು ತೋರಿಸುವ ದಾರಿದೀಪವಾಗಿದೆ. ಪ್ರಸ್ತುತ ಕಾನೂನುಗಳ ಮತ್ತು ನಿಬಂಧನೆಗಳ ಬದಲಾವಣೆಗೆ ಹೊಂದಿಕೆಯಾಗುವಂತೆ ಈ ನೀತಿಗಳು ಕ್ರಿಯಾತ್ಮಕವಾಗಿವೆ ಮತ್ತು ಅವುಗಳನ್ನು ನಿಯತಕಾಲಿಕವಾಗಿ ನವೀಕರಿಸಲಾಗುತ್ತದೆ ಹಾಗಿದ್ದೂ ಅದರ ಪ್ರಮುಖ ಅಂಶಗಳಲ್ಲಿ ಬದಲಾವಣೆಗಳಾಗುವುದಿಲ್ಲ.
ನಾವು ಪಾಲಿಸುವ ಮೌಲ್ಯಗಳು ಮತ್ತು ತತ್ವಗಳ ಕುರಿತು ಉದ್ಯೋಗಿಗಳು ತಮ್ಮ ಕರ್ತವ್ಯಗಳು ಮತ್ತು ಬದ್ಧತೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನಮ್ಮ ಉದ್ಯೋಗಿಗಳಿಗೆ ಸಹಾಯ ಮಾಡಲು ನಾವು ಹೊಂದಿರುವ ಬದ್ದತೆಗೆ ಈ ನೀತಿ ಸಂಹಿತೆ ಸಾಕ್ಷಿಯಾಗಿದೆ.
ಟಾಟಾ ನೀತಿ ಸಂಹಿತೆ (ಟಿಸಿಓಸಿ) ಓದಲು ಕೆಳಗೆ ಕ್ಲಿಕ್ ಮಾಡಿ: